ಗೌಪ್ಯತಾ ನೀತಿ
ಟಾಟಾ ಮೋಟಾರ್ಸ್ ಲಿಮಿಟೆಡ್ ಅನ್ನು ಮುಂದೆ [‘ಟಿಎಮ್‌ಎಲ್ ’] ಎಂದು ಉಲ್ಲೇಖಿಸಲಾಗುತ್ತಿದ್ದು ನಿಮ್ಮ ವೈಯಕ್ತಿಕ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ಬದ್ಧವಾಗಿದೆ. ನಿಮ್ಮ ವೈಯಕ್ತಿಕ ಡೇಟಾದ ಪ್ರಕ್ರಿಯೆಯಲ್ಲಿ ನಿಮ್ಮ ಗೌಪ್ಯತೆಯ ರಕ್ಷಣೆಯು ನಮ್ಮ ಉದ್ಯಮ ಪ್ರಕ್ರಿಯೆಯಲ್ಲಿ ನಾವು ವಿಶೇಷ ಗಮನವನ್ನು ನೀಡುವುದು ಪ್ರಮುಖ ಕಳಕಳಿಯಾಗಿದೆ. ವೆಬ್‌ಸೖಟ್‌ಗಳನ್ನು ನಿರ್ವಹಿಸುವ ರಾಷ್ಟ್ರಗಳಿಗಾಗಿ ಮಾನ್ಯವಾಗಿರುವ ಕಾನೂನು ನಿಬಂಧನೆಗಳ ಪ್ರಕಾರ ನಮ್ಮ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ ಸಮಯದಲ್ಲಿ ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ನಾವು ಪ್ರಕ್ರಿಯೆಗೊಳಿಸುತ್ತೆವೆ.
ಈ ಗೌಪ್ಯತೆ ಪ್ರಕಟಣೆಯು ಈ ವೆಬ್ಸೈಟ್ ಮೂಲಕ ಟಿಎಮ್‌ಎಲ್ ಸಂಗ್ರಹಿಸುವ ನಿಮ್ಮ ಬಗೆಗಿನ ಮಾಹಿತಿಯನ್ನು , ಆ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ, ನಿರ್ವಹಿಸಲಾಗುತ್ತದೆ, ಹಂಚಿಕೊಳ್ಳಲಾಗಿದೆ , ರಕ್ಷಿಸಲಾಗಿದೆ ಹಾಗೂ ಇದನ್ನು ನೀವು ಹೇಗೆ ನವೀಕರಿಸಬಹುದು ಎನ್ನುವುದನ್ನು ವಿವರಿಸುತ್ತದೆ . ಎಲೆಕ್ಟ್ರಾನಿಕ್ ಅಥವಾ ಪೇಪರ್ ಒಳಗೊಂಡು , ಯಾವುದೇ ಸ್ವರೂಪದಲ್ಲಿ ಯುರೋಪಿಯನ್ ಇಕಾನಾಮಿಕ್ ಏರಿಯಾ [‘‘ಇಇಎ’’]ದಿಂದ ಟಿಎಮ್‌ಎಲ್ ಮೂಲಕ ಪಡೆದ ಎಲ್ಲಾ ವೈಯಕ್ತಿ ಡೇಟಾಕ್ಕೆ ಇದು ಅನ್ವಯಿಸುತ್ತದೆ. ಕೆಳಗೆ ಪೋಸ್ಟ್ ಮಾಡಿದ ದಿನಾಂಕದಂದು ಇದು ಪರಿಣಾಮಕಾರಿಯಾಗಿದೆ ಹಾಗೂ ಪರಿಣಾಮಕಾರಿ ದಿನಾಂಕದ ನಂತರ ನಿಮ್ಮ ಮಾಹಿತಿಯ ನಮ್ಮ ಬಳಕೆಗೆ ಅನ್ವಯಿಸುತ್ತದೆ.
ನಾವು ಸಂಗ್ರಹಿಸುವ ವೈಯಕ್ತಿಕ ಡೇಟಾ
ವೈಯಕ್ತಿಕ ಡೇಟಾವು ಟಿಎಮ್‌ಎಲ್‌ಗೆ ನೀವು ಯಾರೆಂದು ತಿಳಿಯಲು ಅನುಮತಿಸುವ ಡೇಟಾವನ್ನು ಸೂಚಿಸುತ್ತದೆ ಹಾಗೂ ಇದನ್ನು ನಿಮ್ಮನ್ನು ಗುರುತಿಸಲು, ಸಂಪರ್ಕಿಸಲು ಅಥವಾ ಪತ್ತೆ ಮಾಡಲು ಬಳಸಬಹುದು [ಉದಾ. ಹೆಸರು,ವಯಸ್ಸು, ಲಿಂಗ, ಮೇಲಿಂಗ್ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ]. ಸಮೀಕ್ಷೆಗೆ ಪ್ರತಿಕ್ರಿಯೆಯಾಗಿ ,ನೀವು ಇವೆಂಟ್‌ಗಳಿಗಾಗಿ ನೋಂದಾಯಿಸಿದ ಸಂದರ್ಭದಲ್ಲಿ, ವೈಯಕ್ತಿಕ ಗೊಳಿಸಲಾದ ಸೇವೆಗಳಿಗೆ ನೋಂದಾಯಿಸುವಾಗ, ಪ್ರಾಡಕ್ಟ್ ಬಗ್ಗೆ ಮಾಹಿತಿಯನ್ನು ಕೋರಿದಾಗ ಅಥವಾ ನಮ್ಮ ಸೇವೆಗಳನ್ನು ಬಳಸುವಾಗ ಅಥವಾ ಕಸ್ಟಮರ್ ಸಪೋರ್ಟ್ ಕೋರಿದಂತಹ ಸಂದರ್ಭಗಳಲ್ಲಿ ನೀವು ಒದಗಿಸಿದಾಗ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ. ನಾವು ನಿಮ್ಮ ಹೆಸರು, ವಿಳಾಸ, ಝಿಪ್ ಕೋಡ್, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ, ಐಪಿ ವಿಳಾಸ, ಸ್ಥಳದ ಮಾಹಿತಿನಿಮ್ಮ ಡಿವೈಸ್ ಬಗ್ಗೆ ಮಾಹಿತಿ , ಮುಂತಾದ ಸನ್ನಿವೇಶಗಳಿಗೆ ಸಂಬಂಧಿಸಿದ ನಿಮ್ಮ ವೈಯಕ್ತಿಕ ಡೇಟಾವನ್ನು ಒದಗಿಸಲು ಕೇಳಬಹುದು. ಟಿಎಮ್‌ಎಲ್ ನಿಮ್ಮ ಬಗ್ಗೆ ಹೊಂದಿರುವ ಎಲ್ಲಾ ವೈಐಯಕ್ತಿಕ ಡೇಟಾವುಯಾವಾಗಲೂ ನೇರವಾಗಿ ನಿಮ್ಮಿಂದ ಬರುವುದಿಲ್ಲ . ಉದಾಹರಣೆಗೆ , ನಿಮ್ಮ ಉದ್ಯೋಗದಾತರಿಂದ ಬರಬಹುದು ಅಥವಾ ನೀವು ಸೇರಿರುವ ಇತರ ಸಂಸ್ಥೆಗಳಿಂದ ಬರಬಹುದು. ಹೀಗಿದ್ದಾಗ್ಯೂ, ನೀವು ಈ ಸೈಟ್‌ನೊಂದಿಗೆ ಸಂವಹನ ನಡೆಸಿದಾಗ ಹಾಗೂ /ಅಥವಾ ಈ ಸೈಟ್‌ನಲ್ಲಿ ನೀಡಿರುವ ಸೇವೆಗಳನ್ನು ಬಳಸುವಾಗ ಟಿಎಮ್‌ಎಲ್ ನಿಮ್ಮ ಬಗ್ಗೆ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತದೆ. ಉದಾಹರಣೆಗಾಗಿ :
- ಈ ಸೈಟ್ ಮೂಲಕ ನೀವು ಕೆಲಸ ಅಥವಾ ಇತರ ಸಿಬ್ಬಂದಿ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿದರೆ , ನಿಮ್ಮ ರೆಸ್ಯೂಮ್ ಹಾಗೂ ಇತರ ಸಂಪರ್ಕ ಮಾಹಿತಿಗಳಾದಂತಹ ನಿಮ್ಮ ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಮೇಲಿಂಗ್ ವಿಳಾಸವನ್ನು ಸಲ್ಲಿಸಲು ನಿಮ್ಮನ್ನು ಕೇಳುತ್ತಾರೆ. ನೀವು ನಿರ್ದಿಷ್ಟಪಡಿಸಿರುವ ಉದ್ಯೋಗಾವಕಾಶಕ್ಕಾಗಿ ನಿಮ್ಮನ್ನು ಪರಿಗಣಿಸಲು ನಾವು ಈ ಮಾಹಿತಿಯನ್ನು ಬಳಸುತ್ತೇವೆ. ಈ ಸೈಟ್‌ನಲ್ಲಿ ಜಾಹೀರಾತು ಮಾಡಿರುವ ಇತರ ಸಿಬ್ಬಂದಿಯ ಅವಕಾಶಗಳು, ಎರಡೂ ಅವಕಾಶಗಳಿಗಾಗಿ ನಿಮ್ಮನ್ನು ಸಂಪರ್ಕಿಸಲು ಸಹ ನಾವು ಈ ಮಾಹಿತಿಯನ್ನು ಬಳಸುತ್ತೇವೆ.
- ನಮ್ಮ ಸೈಟ್‌ನ ಕೆಲವು ವೈಶಿಷ್ಟ್ಯತೆಗಳೊಂದಿಗೆ ನಮಗೆ ಸಹಾಯ ಮಾಡಲು ಮೂರನೇ ವ್ಯಕ್ತಿ/ಪಕ್ಷದ ಸೇವಾ ಒದಗಣೆದಾರರನ್ನು ನಾವು ಬಳಸಬಹುದು. ನಮ್ಮ ಸೇವಾ ಒದಗಣೆದಾರರು ನಿಮ್ಮ ಮಾಹಿತಿಯನ್ನು ನಮ್ಮ ಪರವಾಗಿ ಸ್ವೀಕರಿಸುತ್ತಾರೆ ಹಾಗೂ ಇದನ್ನು ಇತರ ಯಾವುದೇ ಉದ್ದೇಶಕ್ಕಾಗಿ ಬಳಸಲು ಅನುಮತಿಸಲಾಗುವುದಿಲ್ಲ.
- ಈಸೈಟ್‌ನೊಂದಿಗೆ ನೀವು ಸಮೀಕ್ಷೆಗೆ ಉತ್ತರಿಸುವಾಗ ಹಾಗೂ ಸಮಸ್ಯೆಯನ್ನು ವರದಿ ಮಾಡುವಾಗ ಅಥವಾ ಈ ಸೈಟ್‌ನಲ್ಲಿ ನೀಡಲಾಗುವ ಸೇವೆಗಳನ್ನು ಒಳಗೊಂಡಂತೆ ಈ ವೆಬ್‌ಸೈಟ್‌ನೊಂದಿಗೆ ನೀವು ಹೊಂದಿರುವ ಇತರ ಸಂವಹನಗಳಿಗೆ ಸಂಬಂಧಿಸಿದಂತೆ ನಾವು ವೆಯಕ್ತಿಕ ಡೇಟಾವನ್ನು ಸಹ ಕೇಳಬಹುದು.
- ಡೀಲರ್ ಶಿಪ್ /ಡಿಸ್ಟ್ರಿಬ್ಯೂಟರ್‌ಶಿಪ್[ ವಿತರಕರು /ಹಂಚಿಕೆದಾರರ ಅಪ್ಲಿಕೇಶನ್‌ಗಳ ಮೂಲಕ] ರೂಪದಲ್ಲಿ ನಮ್ಮೊಂದಿಗೆ ನೀವು ವ್ಯವಹಾರ ಮಾಡಲು ಬಯಸಿದರೆ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ.
- ಹಿತಾಸಕ್ತಿ ಎಂದು ನಾವು ಬಾವಿಸುವ ಸೇವೆಗಳನ್ನು ನೀಡಲು , ಡೇಟಾ ನಿಖರತೆಯನ್ನು ನಿರ್ವಹಿಸಲು ನಮಗೆ ಸಹಾಯ ಮಾಡಲು ಸೇವೆಗಳನ್ನು ನೀಡಲು ಹಾಗೂ ವೃದ್ಧಿಸಲು ನಮ್ಮ ಪಾಲುದಾರರು, ಸೇವಾ ಒದಗಣೆದಾರರು, ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ವೆಬ್‌ಸೈಟ್‌ಗಳಂತಹ ಮೂರನೇ ವ್ಯಕ್ತಿ/ಪಕ್ಷಗಳಿಂದ , ಸಹ ನಾವು ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ.
ಟಿಎಮ್ಎಲ್ ವೆಬ್‌ಸೈಟ್‌ಗಳು ಇತರ ವೆಬ್‌ಸೈಟ್‌ಗಳೊಂದಿಗೆ ಲಿಂಕ್‌ಗಳನ್ನು ಹೊಂದಿರಬಹುದು. ಗೌಪ್ಯತೆಗಳ ಪ್ರಕಟಣೆಗೆ ಅಥವಾ ಅಂತಹ ವೆಬ್‌ಸೈಟ್‌ಗಳ ವಿಷಯಕ್ಕೆ ಟಿಎಮ್‌ಎಲ್ ಜವಾಬ್ದಾರವಾಗಿರುವುದಿಲ್ಲ :
- ನಮ್ಮ ವೆಬ್‌ಸೈಟ್‌ನಿಂದ ಲಿಂಕ್ಗಳನ್ನು ಬಳಸಿಕೊಂಡು ಮೂರನೇ ವ್ಯಕ್ತಿ/ಪಕ್ಷದ ವೆಬ್‌ಸೈಟ್ ಅನ್ನು ಪ್ರವೇಶಿಸಿರುವುದು ಅಥವಾ
- ಮೂರನೇ ವ್ಯಕ್ತಿ/ಪಕ್ಷದ ವೆಬ್‌ಸೈಟ್‌ನಿಂದ ನಮ್ಮ ವೆಬ್‌ಸೈಟ್‌ಗೆ ನೀವು ಲಿಂಕ್ ಮಾಡಿರುವುದು
ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ಬಳಸುತ್ತೇವೆ
ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಬಳಸಲು ಸರಿಯಾದ ಕಾರಣವನ್ನು ಹೊಂದಿದ್ದರೆ ಮಾತ್ರ ನಾವು ಹಾಗೆ ಮಾಡುತ್ತೇವೆ. ಈ ಒಂದು ಅಥವಾ ಹೆಚ್ಚಿನ ಕಾರಣಗಳಿಗಾಗಿ ಮಾತ್ರ ನಾವು ನಿಮ್ಮ ಡೇಟಾವನ್ನು ಬಳಸುತ್ತೇವೆ :
- ನಾವು ನಿಮ್ಮೊಂದಿಗೆ ಹೊಂದಿರುವ ಕಾಂಟ್ರ್ಯಾಕ್ಟ್ ಅನ್ನು ಪೂರೈಸಲು ,
- ಅಥವಾ ನಿರ್ದಿಷ್ಟ ಕಾರಣಕ್ಕಾಗಿ ನಿಮ್ಮ ಡೇಟಾವನ್ನು ಬಳಸಲು ನಾವು ಕಾನೂನು ಕರ್ತವ್ಯವನ್ನು ಹೊಂದಿದ್ದರೆ,
- ಅಥವಾ ಇದನ್ನು ಬಳಸಲು ನಾವು ನಿಮ್ಮ ಒಪ್ಪಿಗೆಯನ್ನು ಪಡೆದಾಗ,
- ನಿಮ್ಮ ಡೇಟಾವನ್ನು ಬಳಸುವುದಕ್ಕಾಗಿ ನಮ್ಮ ವ್ಯವಹಾರ ಅಥವಾ ವಾಣಿಜ್ಯ ಕಾರಣಗಳಾದ ನಮ್ಮ ನ್ಯಾಯಸಮ್ಮತ ಹಿತಾಸಕ್ತಿಗಳಲ್ಲಿರುವಾಗ,ಆದರೆ ಹಾಗಿರುವಾಗ ಸಹ , ನಮ್ಮ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ನಾವು ನಿಮಗೆ ಅನ್ಯಾಯವಾಗಿ ಹೇರುವುದಿಲ್ಲ.
ನಿಮ್ಮ ಮಾಹಿತಿಯ ಬಳಕೆಯನ್ನು ನಮ್ಮ ಬಳಕೆಯ ಸಮಯದಲ್ಲಿ ಜಾರಿಯಲ್ಲಿರುವ ಗೌಪ್ಯತೆ ನೋಟೀಸಿಗೆ ಒಳಪಟ್ಟಿರುತ್ತದೆ. ನಿಮ್ಮ ಸಾಮಾನ್ಯ ವ್ಯವಹಾರದ ಬಳಕೆಗಾಗಿ ನಮಗೆ ಒದಗಿಸಲಾದ ಮಾಹಿತಿಯನ್ನು ಟಿಎಮ್‌ಎಲ್ ಬಳಸುತ್ತದೆ. ಇದು ಕೆಳಗಿನ ಉದ್ದೇಶಗಳನ್ನು ಒಳಗೊಂಡಿರಬಹುದು:
- ನಿಮ್ಮ ಕೋರಿಕೆಗಳಿಗೆ ಪ್ರತಿಕ್ರಿಯಿಸಲು ;
- ಗ್ರಾಹಕರ ಸೇವೆಗಳ ಸಮಸ್ಯೆಗಳನ್ನೊಳಗೊಂಡು ನಿಮಗೆ ಸೇವೆಗಳನ್ನು ಒದಗಿಸಲು ;
- ನಮ್ಮ ಅಥವಾ ನಮ್ಮ ಅಂಗಸಂಸ್ಥೆಳ ಪ್ರಸ್ತುತ ಸೇವೆಗಳು, ಅಥವಾ ಹೊಸ ಸೇವೆಗಳು ಅಥವಾ ನಾವು ಅಭಿವೃಧ್ದಿಪಡಿಸುವ ಪ್ರಚಾರಗಳು, ಹಾಗೂ ನಿಮಗೆ ಲಭ್ಯವಿರಬಹುದಾದ ಅವಕಾಶಗಳ ಬಗ್ಗೆ ನಿಮಗೆ ಸಂವಹನಗಳನ್ನು ಕಳಿಸಲು ;
- ನಮ್ಮ ಸೇವೆಗಳ ಹೊಸ ವೈಶಿಷ್ಟ್ಯತೆ ಹಾಗೂ ವರ್ಧನೆಗಳ ಬಗ್ಗೆ ನಿಮ್ಮನ್ನು ಎಚ್ಚರಿಸಲು,
- ನೀವು ವಿಚಾರಿಸಿದ ಉದ್ಯೋಗ ಅಥವಾ ವೃತ್ತಿ ಅವಕಾಶಗಳ ಬಗ್ಗೆ ನಿಮ್ಮೊಂದಿಗೆ ಸಂವಹನ ನಡೆಸಲು ;
- ನಿಮಗಾಗಿ ನಮ್ಮ ಸೈಟ್ ಹಾಗೂ ನಮ್ಮ ಸೇವೆಗಳು ಪರಿಣಾಮಕಾರಿ ರೀತಿಯಲ್ಲಿ ಕಾರ್ಯವೆಸಗುವುದನ್ನು ಖಚಿತಪಡಿಸಿಕೊಳ್ಳಲು;
- ಜಾಹೀರಾತು ಹಾಗೂ ಪ್ರಭಾವದ ಪರಿಣಾಮಕಾರಿತ್ವವನ್ನು ಅಳೆಯಲು ಹಾಗೂ ಅರ್ಥಮಾಡಿಕೊಳ್ಳಲು.
- ಮಾರ್ಕೆಟಿಂಗ್ ಹಾಗೂ ಇವೆಂಟ್‌ಗಳು : ಇಮೇಲ್, ದೂರವಾಣಿ, ಟೆಕ್ಸ್ಟ್ ಮೆಸೇಜಿಂಗ್, ಡೈರೆಕ್ಟ್ ಮೇಲ್, ಹಾಗೂ ಆನ್‌ಲೈನ್ ನಂತಹ ವಿವಿಧ ಪ್ಲ್ಯಾಟ್‌ಫಾರ್ಮ್‌ಗಳಾದ್ಯಂತ ಮಾರ್ಕೆಟಿಂಗ್ ಹಾಗೂ ಇವೆಂಟ್ ಸಂವಹನಗಳನ್ನು ನಿಮಗೆ ತಿಳಿಸಲು ನಾವು ವೈಯಕ್ತಿಕ ಮಾಹಿತಿಯನ್ನು ಬಳಸುತ್ತೇವೆ. ನಾವು ನಿಮಗೆ ಮಾರ್ಕೆಟಿಂಗ್ ಇಮೇಲ್ ಅನ್ನು ಕಳುಹಿಸಿದರೆ, ಭವಿಷ್ಯದಲ್ಲಿ ಈ ಇಮೇಲ್‌ಗಳ ಪಡೆಯುವಿಕೆಯನ್ನು ಹೇಗೆ ತ್ಯಜಿಸಬೇಕು ಎನ್ನುವ ಸೂಚನೆಗಳನ್ನು ಇದು ಒಳಗೊಂಡಿರುತ್ತದೆ. ನಿಮ್ಮ ಮಾಹಿತಿಯನ್ನು ನಿರ್ವಹಿಸಲು ಹಾಗೂ ಮಾರ್ಕೆಟಿಂಗ್ ಆದ್ಯತೆಯನ್ನು ನಿರ್ವಹಿಸುವುದಕ್ಕಾಗಿ ನಾವು ಇಮೇಲ್ ಆದ್ಯತೆಯ ಕೇಂದ್ರಗಳನ್ನು ಸಹ ನಿರ್ವಹಿಸುತ್ತೇವೆ.ಮಾರ್ಕೆಟಿಂಗ್ ಇಮೇಲ್‌ಗಳನ್ನು ಸ್ವೀಕರಿಸುವುದನ್ನು ನೀವು ತ್ಯಜಿಸಿದರೂ ಸಹ , ನಿಮ್ಮ ಖಾತೆಗಳು ಹಾಗೂ ಚಂದಾದಾರಿಕೆಗಳಿಗೆ ಸಂಬಂಧಿಸಿದ ಪ್ರಮುಖ ಸೇವಾ ಮಾಹಿತಿಯನ್ನು ನಾವು ಕಳಿಸಬಹುದು ಎನ್ನುವುದನ್ನು ದಯವಿಟ್ಟುನೆನಪಿನಲ್ಲಿಟ್ಟುಕೊಳ್ಳಿ.
- ಕಾನೂನು ಬಾಧ್ಯತೆಗಳು : ಅಪರಾಧ ತಡೆಗಟ್ಟುವಿಕೆ,ಪತ್ತೆಹಚ್ಚುವಿಕೆ, ಅಥವಾ ತನಿಖೆಯಂತಹ ಕಾನೂನು ಹಾಗೂ ಅನುಸರಣೆ ಕಾರಣಗಳಿಗಾಗಿ ವೈಯಕ್ತಿಕ ಡೇಟಾವನ್ನು ಬಳಸುವುದು ಹಾಗೂ ಉಳಿಸಿಕೊಳ್ಳುವುದು ನಮಗೆ ಅಗತ್ಯವಾಗಿರಬಹುದು; ನಷ್ಟ ತಡೆಗಟ್ಟುವಿಕೆ ;ಅಥವಾ ವಂಚನೆ. ನಮ್ಮ ಆಂತರಿಕ ಹಾಗೂ ಬಾಹ್ಯ ಲೆಕ್ಕ ಪರಿಶೋಧನೆಯ ಅವಶ್ಯಕತೆಗಳು , ಮಾಹಿತಿಯ ಸುರಕ್ಷತೆಯ ಉದ್ದೇಶಗಳನ್ನು ಪೂರೈಸಲು ಸಹ ನಾವು ವೈಯಕ್ತಿಕ ಮಾಹಿತಿಯನ್ನು ಬಳಸಬಹುದು, ಹಾಗೂ ಅಗತ್ಯ ಅಥವಾ ಸೂಕ್ತವೆಂದು ನಾವು ನಂಬುತ್ತೇವೆ :
- ಅನ್ವಯಿಸುವ ಕಾನೂನಿನಡಿಯಲ್ಲಿ , ಇದು ನಿಮ್ಮ ವಾಸಸ್ಥಳದ ರಾಷ್ಟ್ರದ ಹೊರಗಿನ ಕಾನೂನುಗಳನ್ನು ಒಳಗೊಂಡಿರಬಹುದು;
- ನ್ಯಾಯಾಲಯಗಳು, ಕಾನೂನು ಜಾರಿಗೊಳಿಸುವ ಏಜನ್ಸಿಗಳು, ನಿಯಂತ್ರಕ ಏಜನ್ಸಿಗಳು, ಹಾಗೂ ಇತರ ಸಾರ್ವಜನಿಕ ಹಾಗೂ ಸರ್ಕಾರಿ ಪ್ರಾಧಿಕಾರಗಳ ಕೋರಿಕೆಗಳಿಗೆ ಪ್ರತಿಕ್ರಿಯಿಸಲು,ನೀವು ವಾಸಿಸುವ ರಾಷ್ಟ್ರದ ಹೊರಗೆ ಅಂತಹ ಪ್ರಾಧಿಕಾರಗಳನ್ನು ಹೊಂದಿರಬಹುದು;
ನಿಮಗಾಗಿ ಸೇವೆಗಳನ್ನು ನಿರ್ವಹಿಸಲು ಅಥವಾ ನಿಮ್ಮ ವಿಚಾರಣೆಗಳಿಗೆ ಪ್ರತಿಕ್ರಿಯಿಸಲು ಸಮಂಜಸವಾಗಿ ಅಗತ್ಯವಿರುವ ಅಂತಹ ಮಾಹಿತಿಗಳನ್ನು ಮಾತ್ರ ನಾವು ಸಂಗ್ರಹಿಸಲು ಪ್ರಯತ್ನಿಸುತ್ತೇವೆ. ನೀವು ಒದಗಿಸುವ ಮಾಹಿತಿಯು ನಿಖರವಾಗಿದೆ, ಸಂಪೂರ್ಣವಾಗಿದೆ ಹಾಗೂ ಪ್ರಸ್ತುತವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರುತ್ತದೆ.
ನಾವು ಯಾವಾಗ ವೈಯಕ್ತಿಕ ಡೇಟಾವನ್ನು ಶೇರ್ ಮಾಡುತ್ತೇವೆ
ಸೇವೆಗಳನ್ನು ಒದಗಿಸಲು ಅಥವಾ ನಮ್ಮ ವ್ಯವಹಾರಗಳ ಕಾರ್ಯಾಚರಣೆಗಳನ್ನು ನಡೆಸಲು ಅಗತ್ಯವಿದ್ದಾಗ ಟಿಎಮ್‌ಎಲ್ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳುತ್ತದೆ ಹಾಗೂ ಬಹಿರಂಗಪಡಿಸುತ್ತದೆ. ಟಿಎಮ್‌ಎಲ್ ನಿಮ್ಮ ವೈಯಕ್ತಿಕ ಡೇಟಾವನ್ನು ಹೊರಗಡೆ ವರ್ಗಾಯಿಸಲು ಉದ್ದೇಶಿಸಿದರೆ, ಟಿಎಮ್‌ಎಲ್ ನಿಮ್ಮ ಗೌಪ್ಯತೆಯ ಹಕ್ಕುಗಳನ್ನು ರಕ್ಷಿಸುವುದನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಸಾಕಷ್ಟು ಸುರಕ್ಷತೆಗಳು ಜಾರಿಯಲ್ಲಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತದೆ. ನಾವು ನಿಮ್ಮ ಬಗ್ಗೆ ಯಾವುದೇ ವಿಶೇಷ ವರ್ಗಗಳ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವುದಿಲ್ಲ [ ಇದು ನಿಮ್ಮ ಜನಾಂಗ ಅಥವಾ ಜನಾಂಗೀಯತೆ, ಧಾರ್ಮಿಕ ಅಥವಾ ತಾತ್ವಿಕ ನಂಬಿಕೆಗಳು, ಲೈಂಗಿಕ ಜೀವನ, ಲೈಂಗಿಕ ದೃಷ್ಟಿಕೋನ, ರಾಜಿಕೀಯ ಅಭಿಪ್ರಾಯಗಳು, ಟ್ರೇಡ್ ಯೂನಿಯನ್ ಸದಸ್ಯತ್ವ, ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಆನುವಂಶಿಕ ಹಾಗೂ ಬಯೋಮ್ಯಾಟ್ರಿಕ್ ಡೇಟಾ ಬಗ್ಗೆ ವಿವರಗಳನ್ನು ಇದು ಒಳಗೊಂಡಿದೆ] ಅಥವಾ ನಾವು ಕ್ರಿಮಿನಲ್ [ಅಪರಾಧದ] ನಿರ್ಧಾರ ಅಥವಾ ಅಪರಾಧಗಳ ಬಗ್ಗೆ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.
ಈ ಸೈಟನಲ್ಲಿ ಸಿಬ್ಬಂದಿ ಅವಕಾಶಗಳ ಜಾಹೀರಾತಿಗಾಗಿ ನಿಮ್ಮ ಅರ್ಜಿಗೆ ಸಂಬಂಧಿಸಿದಂತೆ , ಅಥವಾ ನಮ್ಮ ಅಂಗಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಅವಕಾಶಗಳಿಗೆ ಸಂಬಂಧಿಸಿದಂತೆ ಟಿಎಮ್‌ಎಲ್‌ನ ಅಂಗಸಂಸ್ಥೆಯಲ್ಲದ ಮೂರನೇವ್ಯಕ್ತಿ/ಪಕ್ಷದ ಗ್ರಾಹಕರಿಗೆ ನಿಮ್ಮ ಬಗ್ಗೆ ಮಾಹಿತಿಯನ್ನು ನಿಮ್ಮ ಒಪ್ಪಿಗೆಯೊಂದಿಗೆ , ಟಿಎಮ್ಎಲ್ ಬಹಿರಂಗಪಡಿಸಬಹುದು. ಉದಾಹರಣೆಗಾಗಿ -
ಟಿಎಮ್‌ಎಲ್ ಒಳಗಡೆ : ವಿಶ್ವದಾದ್ಯಂತ ನಮ್ಮ ಉದ್ಯಮಗಳಿಗೆ ವಿವಿಧ ಟೀಎಮ್‌ಎಲ್ ಟೀಮ್‌ಗಳು ಹಾಗೂ ಕಾರ್ಯಗಳು ಬೆಂಬಲ ನೀಡುತ್ತವೆ, ಹಾಗೂ ಸೇವೆಗಳು ,ಖಾತೆ ಆಡಳಿತ,ಸೆಲ್ಸ ಹಾಗೂ ಮಾರ್ಕೆಟಿಂಗ್, ಗ್ರಾಹಕರ ಹಾಗೂ ತಾಂತ್ರಿಕ ಬೆಂಬಲ, ಉದ್ಯಮಗಳು ಹಾಗೂ ಪ್ರಾಡಕ್ಟ್ ಅಭಿವೃದ್ಧಿಯ ಒದಗಿಕೆಗಾಗಿ ಅವಶ್ಯಕತೆಯಿದ್ದರೆ ವೈಯಕ್ತಿಕ ಮಾಹಿತಿಯನ್ನು ಅವರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ವೈಯಕ್ತಿಕ ಡೇಟಾವನ್ನು ನಿಭಾಯಿಸುವಾಗ ನಮ್ಮ ಎಲ್ಲಾ ಉದ್ಯೋಗಿಗಳು ಹಾಗೂ ಗುತ್ತಿಗೆದಾರರು ನಮ್ಮ ಡೇಟಾ ರಕ್ಷಣೆ ಹಾಗೂ ಭದ್ರತೆಯ ನೀತಿಗಳನ್ನು ಅನುಸರಿಸಬೇಕಾಗುತ್ತದೆ.
ಉದ್ಯಮದ ಪಾಲುದಾರರುಗಳು : ಸಹ -ಬ್ಯಾಂಡ್ ಸೇವೆಗಳನ್ನು ನೀಡಲು, ವಿಷಯವನ್ನು ಒದಗಿಸಲು , ಅಥವಾ ಇವೆಂಟ್‌ಗಳು , ಸಮ್ಮೇಳನಗಳು,ಹಾಗೂ ಸೆಮಿನಾರ್‌ಗಳನ್ನು ನಡೆಸಲು ನಾವು ಇತರ ಸಂಸ್ಥೆಗಳೊಂದಿಗೆ ಕೆಲವೊಮ್ಮೆ ಸಹಯೋಗಮಾಡಿಕೊಳ್ಳುತ್ತೇವೆ. ಈ ವ್ಯವಸ್ಥೆಗಳ ಭಾಗವಾಗಿ, ನೀವು ಟಿಎಮ್‌ಎಲ್ ಹಾಗೂ ನಮ್ಮ ಪಾಲುದಾರರು ಇಬ್ಬರ,ಗ್ರಾಹಕರೂ ಆಗಿರಬಹುದು, ಹಾಗೂ ನಮ್ಮ ಪಾಲುದಾರರು ಹಾಗೂ ನಾವು ನಿಮ್ಮ ಬಗ್ಗೆಯ ಮಾಹಿತಿಯನ್ನು ಸಂಗ್ರಹಿಸಬಹುದು ಹಾಗೂ ಹಂಚಿಕೊಳ್ಳಬಹುದು. ಗೌಪ್ಯತಾ ನೋಟಿಸಿಗೆ ಅನುಗುಣವಾಗಿ ಟಿಎಮ್‌ಎಲ್ ವೈಯಕ್ತಿಕ ಡೇಟಾವನ್ನು ನಿರ್ವಹಿಸುತ್ತದೆ.
ನಮ್ಮ ಮೂರನೇ ವ್ಯಕ್ತಿ ಸೇವಾ ಒದಗಣೆದಾರರು:ಅಗತ್ಯವಿರುವ ಯಾವುದೇ ಬೆಂಬಲಕ್ಕಾಗಿ ವಿಶ್ವದಾದ್ಯಂತದ ಸೇವಾಒದಗಣೆದಾರರೊಂದಿಗೆ ನಾವು ಸಹಯೋಗ ಮಾಡಿಕೊಳ್ಳುತ್ತೇವೆ. ಸಾಫ್ಟವೇರ್, ಸಿಸ್ಟಮ್ ಹಾಗೂ ಪ್ಲ್ಯಾಟ್‌ಫಾರ್ಮ್ ಸಪೋರ್ಟ್; ಡೈರೆಕ್ಟ್ ಮಾರ್ಕೆಟಿಂಗ್ ಸರ್ವಿಸ್‌ಗಳು;ಕ್ಲೌಡ್ ಹಾಸ್ಟಿಂಗ್ ಸರ್ವಿಸ್‌ಗಳು;ಜಾಹೀರಾತು;ಆರ್ಡರ್ ಪೂರೈಕೆ ಹಾಗೂ ವಿತರಣೆಯಂತಹ ಅವರು ನಮಗೆ ನೀಡುವ ಸೇವೆಗಳನ್ನು ಪೂರೈಸಲು ಅವಶ್ಯಕತೆಯಿರುವಾಗ ಮಾತ್ರ ಈ ವ್ಯಕ್ತಿಗಳಿಗೆ ವೈಯಕ್ತಿಕ ಡೇಟಾವನ್ನು ಲಭ್ಯಗೊಳಿಸಬಹುದು. ನಮ್ಮ ಮೂರನೇ -ವ್ಯಕ್ತಿ ಸೇವಾ ಒದಗಣೆದಾರರು ನಮಗೆ ಸೇವೆಗಳನ್ನು ಒದಗಿಸುವುದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶಕ್ಕಾಗಿ ನಾವು ಅವರಿಗೆ ಲಭ್ಯವಾಗಿಸಿದ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳಲು ಅಥವಾ ಬಳಸಲು ಅನುಮತಿ ನೀಡುವುದಿಲ್ಲ.
ಕಾನೂನು ಕಾರಣಗಳಿಗಾಗಿ ಮೂರನೇ ವ್ಯಕ್ತಿಗಳು : ವೈಯಕ್ತಿಕ ಡೇಟಾ ಅಗತ್ಯ ಎಂದು ನಾವು ನಂಬಿದಾಗ ಅದನ್ನು ನಾವು ಹಂಚಿಕೊಳ್ಳುತ್ತೇವೆ, ಅವುಗಳೆಂದರೆ :
- ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಹಾಗೂ ಕಾನೂನು ಜಾರಿ ಹಾಗೂ ಇತರ ಸಾರ್ವಜನಿಕ ಪ್ರಾಧಿಕಾರಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಕೋರಿಕೆಗಳಿಗೆ ಪ್ರತಿಕ್ರಿಯಿಸಲು , ಅದು ನಿಮ್ಮ ವಾಸಸ್ಥಳದ ರಾಷ್ಟ್ರದ ಹೊರಗಡೆಯ ಅಂತಹ ಪ್ರಾಧಿಕಾರಗಳನ್ನು ಒಳಗೊಂಡಿರಬಹುದು.
- ವಿಲೀನ, ಮಾರಾಟ, ಪುನರ್‌ರಚನೆ, ಸ್ವಾದೀನ, ಜಂಟಿ ಉದ್ಯಮ, ನಿಯೋಜನೆ, ವರ್ಗಾವಣೆ , ಅಥವಾ ನಮ್ಮ ಉದ್ಯಮ, ಸ್ವತ್ತುಗಳು, ಅಥವಾ ಸ್ಟಾಕ್ನ [ಯಾವುದೇ ಬ್ಯಾಂಕ್ರಪ್ಟಸಿ ಅಥವಾ ಅಂತಹದೇ ಚಟುವಟಿಕೆಗಳಿಗೆ ಸಂಬಂಧಿಸಿರುವುದನ್ನು ಒಳಗೊಂಡು ]ಎಲ್ಲಾ ಅಥವಾ ಯಾವುದೇ ಭಾಗದ ಇತರ ಏರ್ಪಾಡುಗಳ ಸಂದರ್ಭದಲ್ಲಿ
- ನಮ್ಮ ಹಕ್ಕುಗಳನ್ನು , ಬಳಕೆದಾರರನ್ನು , ವ್ಯವಸ್ಥೆಗಳನ್ನು ಹಾಗೂ ಸೇವೆಗಳನ್ನು ರಕ್ಷಿಸಲು .
ನಾವು ವೈಯಕ್ತಿಕ ಡೇಟಾವನ್ನು ಎಲ್ಲಿ ಸಂಗ್ರಹಿಸುತ್ತೇವೆ ಹಾಗೂ ಪ್ರಕ್ರಿಯೆಗೊಳಿಸುತ್ತೇವೆ
ಜಾಗತಿಕ ಸಂಸ್ಥೆಯಾಗಿ ಟಿಎಮ್‌ಎಲ್, ನಾವು ಸಂಗ್ರಹಿಸಿದ ಮಾಹಿತಿಯನ್ನು ಈ ಗೌಪ್ಯತಾ ಸೂಚನೆ ಹಾಗೂ ಡೇಟಾವನ್ನು ಸಂಗ್ರಹಿಸಿರುವಲ್ಲಿನ ಅನ್ವಯವಾಗುವ ಕಾನೂನಿನ ಅಗತ್ಯತೆಗಳ ಪ್ರಕಾರ ಪ್ರಕ್ರಿಯೆಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಟಿಎಮ್‌ಎಲ್ ವಿಶ್ವದಾದ್ಯಂತ ನಮ್ಮ ಕಚೇರಿಗಳಲ್ಲಿ ನೆಟ್‌ವರ್ಕ್‌ಗಳು, ಡೇಟಾ ಬೇಸ್ಗಳು, ಸರ್ವರ್‌ಗಳು, ಸಿಸ್ಟಮ್‌ಗಳು, ಹಾಗೂ ಸಹಾಯ ಡೆಸ್ಕ್ ಗಳನ್ನು ಹೊಂದಿದೆ. ನಮ್ಮ ಉದ್ಯಮ , ವರ್ಕ್‌ಫೋರ್ಸ್, ಹಾಗೂ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ವಿಶ್ವದಾದ್ಯಂತ ಇರುವ ಕ್ಲೌಡ್ ಹಾಸ್ಟಿಂಗ್ ಸರ್ವಿಸ್‌ಗಳು, ಪೂರೈಕೆದಾರರು, ಹಾಗೂ ತಂತ್ರಜ್ಞಾನ ಬೆಂಬಲದಂತಹ ಮೂರನೇ ವ್ಯಕ್ತಿಗಳೊಂದಿಗೆ ನಾವು ಸಹಯೋಗ ಮಾಡಿಕೊಳ್ಳುತ್ತೇವೆ. ವೆಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲಾಗಿದೆಯೆ, ಸುರಕ್ಷಿತವಾಗಿದೆಯೇ ಹಾಗೂ ಅನ್ವಯಿಸುವ ಕಾನೂನಿನ ಪ್ರಕಾರ ವರ್ಗಾಯಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
ಟಿಎಮ್‌ಎಲ್ ನಿಮ್ಮ ವೈಯಕ್ತಿಕ ಡೇಟಾವನ್ನು ಯಾರೊಬ್ಬರಿಗೂ ಮಾರಾಟ ಮಾಡುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ. ನೀವು ಕೋರಿಕೆ ಮಾಡಿರುವ ಪ್ರಾಡಕ್ಟ್ ಅಥವಾ ಸೇವೆಯನ್ನು ಒದಗಿಸುವಂತಹ ಕೆಲವು ಸಂದರ್ಭಗಳಲ್ಲಿ , ಅಗತ್ಯವಿದ್ದರೆ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಟಿಎಮ್‌ಎಲ್ ಒಳಗೆ ಅಥವಾ ಮೂರನೇವ್ಯಕ್ತಿಗಳಿಗೆ ವರ್ಗಾಯಿಸಬೇಕಾಗಬಹುದು ಅಥವಾ ಬಹಿರಂಗಪಡಿಸಬೇಕಾಗಬಹುದು. ನಿಮ್ಮ ದೇಶದಲ್ಲಿ ಅನ್ವಯವಾಗುವ ಕಾನೂನುಗಳು ಒಂದೇ ರೀತಿಯ ಡೇಟಾ ಗೌಪ್ಯತೆ ರಕ್ಷಣೆಯನ್ನು ನೀಡದ ಇತರ ದೇಶಗಳಿಗೆ ನಾವು ವೈಯಕ್ತಿಕ ಮಾಹಿತಿಯನ್ನು ವರ್ಗಾಯಿಸಿದಾಗ, ಸೂಕ್ತಮಟ್ಟದ ಡೇಟಾ ಗೌಪ್ಯತೆ ರಕ್ಷಣೆಯನ್ನು ಒದಗಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
ನಾವು ವೈಯಕ್ತಿಕ ಡೇಟಾವನ್ನು ಹೇಗೆ ಸುರಕ್ಷಿತಗೊಳಿಸುತ್ತೇವೆ
ನಿಮ್ಮ ವೈಯಕ್ತಿ ಡೇಟಾವನ್ನು ರಕ್ಷಿಸಲು ಟಿಎಮ್‌ಎಲ್ ಸೂಕ್ತವಾದ ತಂತ್ರಜ್ಞಾನಗಳನ್ನು ಹಾಗೂ ಪ್ರಕ್ರಿಯೆಗಳನ್ನು ಬಳಸುತ್ತದೆ. ನಮ್ಮ ಮಾಹಿತಿ ಭದ್ರತಾ ನೀತಿಗಳು ಹಾಗೂ ಪ್ರಕ್ರಿಯೆಗಳು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಅಂತರಾಷ್ಟ್ರೀಯ ಮಾನದಂಡಗಳೊಂದಿಗೆ ನಿಕಟವಾಗಿ ಹೊಂದಿಕೊಳ್ಳುತ್ತವೆ ಹಾಗೂ ನಮ್ಮ ಉದ್ಯಮಗಳ ಅಗತ್ಯತೆಗಳು , ತಂತ್ರಜ್ಞಾನದಲ್ಲಿನ ಬದಲಾವಣೆಗಳು ಹಾಗೂ ನಿಯಂತ್ರಕ ಅಗತ್ಯತೆಗಳನ್ನು ಪೂರೈಸಲು ಅವಶ್ಯಕತೆಯಂತೆ ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಹಾಗೂ ನವೀಕರಿಸಲಾಗುತ್ತದೆ. ಉದಾಹರಣೆಗಾಗಿ ,
- ನೀತಿಗಳು ಹಾಗೂ ಕಾರ್ಯವಿಧಾನಗಳು : ನಿಮ್ಮ ವೈಯಕ್ತಿಕ ಡೇಟಾವನ್ನು ನಷ್ಟಗೊಳಿಸುವುದು, ದುರುಪಯೋಗಪಡಿಸುವುದು , ಮಾರ್ಪಾಡು ಮಾಡುವುದು ಆಥವಾ ಉದ್ದೇಶಪೂರ್ವಕವಾಗಿ ನಾಶಪಡಿಸುವಿಕೆಯಿಂದ ರಕ್ಷಿಸಲು ಉದ್ದೇಶಿಸಿರುವ ಸಮಂಜಸವಾದ ತಾಂತ್ರಿಕ , ಭೌತಿಕ ಹಾಗೂ ಕಾರ್ಯಾಚರಣೆಯ ಭದ್ರತಾ ವಿಧಾನಗಳನ್ನು ಟಿಎಮ್‌ಎಲ್ ಬಳಸಿಕೊಳ್ಳುತ್ತದೆ. ನಿಮ್ಮ ಬಗ್ಗೆ ಸಂಗ್ರಹಿಸಿರುವ ಎಲ್ಲಾ ಡೇಟಾಕ್ಕಾಗಿ ಸೂಕ್ತವಾದ ಭದ್ರತೆಯನ್ನು ಒದಗಿಸುವ ಪ್ರಯತ್ನದಲ್ಲಿ ನಮ್ಮ ಭದ್ರತಾ ಕ್ರಮಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತದೆ ಹಾಗೂ ನವೀಕರಿಸಲಾಗುತ್ತದೆ.
- ನಿಮ್ಮ ವೈಯಕ್ತಿಕ ಡೇಟಾಕ್ಕೆ ಪ್ರವೇಶಿಸಲು ನಾವು ಸೂಕ್ತವಾದ ನಿರ್ಬಂಧಗಳನ್ನು ವಿಧಿಸುತ್ತೇವೆ.
- ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಹಾಗೂ ವರ್ಗಾಯಿಸಲು ಮೇಲ್ವಿಚಾರಣೆ ಹಾಗೂ ಭೌತಿಕ ಕ್ರಮಗಳು ಸೇರಿದಂತೆ ಸೂಕ್ತವಾದ ಭದ್ರತಾ ಕ್ರಮಗಳು ಹಾಗೂ ನಿಯಂತ್ರಣಗಳನ್ನು ನಾವು ಕಾರ್ಯಗತಗೊಳಿಸುತ್ತೇವೆ.
- ವೈಯಕ್ತಿಕ ಡೇಟಾಕ್ಕೆ ಪ್ರವೇಶಾವಕಾಶವನ್ನು ಪಡೆಯುವ ನಮ್ಮ ಉದ್ಯೋಗಿಗಳು ಹಾಗೂ ಗುತ್ತಿಗೆ ದಾರರಿಗಾಗಿ ನಿಯಮಿತ ಆಧಾರದ ಮೇಲೆ ಗೌಪ್ಯತೆ, ಮಾಹಿತಿ ಸುರಕ್ಷತೆ, ಹಾಗೂ ಇತರ ಅನ್ವಯಿಸುವ ತರಬೇತಿಯನ್ನು ನಾವು ಅಪೇಕ್ಷಿಸುತ್ತೇವೆ.
- ನಮ್ಮ ಉದ್ಯೋಗಿಗಳು ಹಾಗೂ ಗುತ್ತಿಗೆದಾರರು ನಮ್ಮ ಮಾಹಿತಿ ಭದ್ರತಾ ನೀತಿಗಳು ಹಾಗೂ ಕಾರ್ಯವಿಧಾನಗಳು ಹಾಗೂ ಯಾವುದೇ ಅನ್ವಯಿಸುವ ಯಾವುದೇ ಒಪ್ಪಂದದ ನಿಬಂಧನೆಗಳಿಗನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
- ನಮ್ಮ ಭದ್ರತಾ ನೀತಿಗಳು ಹಾಗೂ ಕಾರ್ಯವಿಧಾನಗಳ ಅನುಸಾರವಾಗಿ ಅವರಿಗೆ ವಹಿಸಲಾದ ಯಾವುದೇ ವೆಯಕ್ತಿಕ ಡೇಟಾವನ್ನು ರಕ್ಷಿಸಲು ನಮ್ಮ ಮೂರನೇವ್ಯಕ್ತಿ ಮಾರಾಟಗಾರರ ಹಾಗೂ ಒದಗಣೆದಾರರ ಒಪ್ಪಂದಗಳು ಹಾಗೂ ಭದ್ರತಾ ಅವಲೋಕನಗಳೊಂದಿಗೆ ನಾವು ಅಪೇಕ್ಷಿಸುತ್ತೇವೆ.
ಕುಕೀಸ್
ಕಾಲಕಾಲಕ್ಕೆ ನಾವು "ಕುಕಿ" ಎಂದು ಕರೆಯಲಾಗುವ ಪ್ರಮಾಣಿತ ತಂತ್ರಜ್ಞಾನವನ್ನು ನಾವು ಬಳಸಬಹುದು. ಕುಕಿಯು ಕಂಪ್ಯೂಟರ್ ಅಥವಾ ಇತರ ಸಾಧನದಲ್ಲಿ ಇರಿಸಲಾಗಿರುವ ಒಂದು ಸಣ್ಣ ಟೆಕ್ಸ್ಟ್ ಫೈಲ್ ಆಗಿರುತ್ತದೆ ಹಾಗೂ ಬಳಕೆದಾರರನ್ನು ಅಥವಾ ಸಾಧನವನ್ನು ಗುರುತಿಸಲು ಹಾಗೂ ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಅವುಗಳ ಕಾರ್ಯ ಹಾಗೂ ಉದ್ದೇಶಿತ ಉದ್ದೇಶವನ್ನು ಅವಲಂಬಿಸಿ ಕುಕಿಗಳನ್ನು ಸಾಮಾನ್ಯವಾಗಿ ನಾಲ್ಕು ವಿಭಾಗಗಳಲ್ಲಿ ಒಂದಕ್ಕೆ ನಿಯೋಜಿಸಲಾಗುತ್ತದೆ; ಅಗತ್ಯ ಕುಕೀಗಳು, ಕಾರ್ಯಕ್ಷಮತೆಯ ಕುಕಿಗಳು, ಕ್ರಿಯಾತ್ಮಕ ಕುಕಿಗಳು, ಹಾಗೂ ಮಾರುಕಟ್ಟೆ ಉದ್ದೇಶಗಳಿಗಾಗಿ ಕುಕಿಗಳು. ಕುಕಿ ನಿಮ್ಮ ಹಾರ್ಡ್ ಡ್ರೈವ್‌ನಿಂದ ಯಾವುದೇ ಇತರ ಡೇಟಾವನ್ನು ಹಿಂಪಡೆಯಲು , ಕಂಪ್ಯೂಟರ್ ವೈರಸ್‌ಗಳನ್ನು ರವಾನಿಸಲು, ಅಥವಾ ನಿಮ್ಮ ಇ-ಮೇಲ್ ವಿಳಾಸವನ್ನು ಸೆರೆಹಿಡಿಯಲು ಸಾಧ್ಯವಿಲ್ಲ. ಪ್ರಸ್ತುತದಲ್ಲಿ , ವೆಬ್‌ಸೈಟ್‌ಗಳು ಬಳಕೆದಾರರ ಭೇಟಿಯನ್ನು ಹೆಚ್ಚಿಸಲು ಕುಕಿಗಳನ್ನು ಬಳಸುತ್ತವೆ; ಸಾಮಾನ್ಯವಾಗಿ, ಕುಕಿಗಳು ಬಳಕೆದಾರರ ಐಡಿ ಹಾಗೂ ಪಾಸ್‌ವರ್ಡ್ ಅನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು ಹಾಗೂ ಹೋಮ್ ಪೇಜ್‌ಗಳನ್ನು ವೈಯಕ್ತೀಕರಿಸಬಹುದು, ಹಾಗೂ ಸೈಟ್‌ನ ಯಾವ ಭಾಗಗಳಿಗೆ ಭೇಟಿ ನೀಡಲಾಗಿದೆ ಎನ್ನುವುದನ್ನು ಗುರುತಿಸಬಹುದು. ಕುಕಿಯನ್ನು ಇರಿಸಿದಾಗ ನಿಮಗೆ ತಿಳಿಸಲು ನಿಮ್ಮ ಬ್ರೌಸರ್ ಅನ್ನು ಸೆಟ್ ಮಾಡಲು ಸಾಧ್ಯವಿದೆ. ಈ ರೀತಿಯಲ್ಲಿ ಕುಕಿಯನ್ನು ಸ್ವೀಕರಿಸಬೇಕೆ ಎಂದು ನಿರ್ಧರಿಸಲು ನಿಮಗೆ ಅವಕಾಶವಿದೆ. ಈ ವೆಬ್‌ಸೈಟನ್ನು ನಮ್ಮ ವಿಸಿಟರ್‌ಗಳು ಹೇಗೆ ಹಾಗೂ ಯಾವಾಗ ಬಳಸುತ್ತಾರೆ ಎನ್ನುವುದನ್ನು ತೋರಿಸುವ ಮೂಲಕ , ನಮ್ಮ ಸೈಟ್ ಅನ್ನು ನಿರಂತರವಾಗಿ ಸುಧಾರಿಸಲು ಈ ಮಾಹಿತಿಯು ನಮಗೆ ಸಹಾಯ ಮಾಡಬಹುದು.
13 ವರ್ಷಗಳೊಳಗಿನ ವಯಸ್ಸಿನ ಮಕ್ಕಳು
ನಾವು ಮಕ್ಕಳಿಗೆ ನೇರವಾಗಿ ಸೇವೆಯನ್ನು ಒದಗಿಸುವುದಿಲ್ಲ ಅಥವಾ ಅವರ ವೆಯಕ್ತಿಕ ಮಾಹಿತಿಯನ್ನು ಪೂರ್ವಭಾವಿಯಾಗಿ ಸಂಗ್ರಹಿಸುವುದಿಲ್ಲ. ಪೋಷಕರು ಅಥವಾ ಪಾಲಕರು ಟಿಎಮ್‌ಎಲ್ ಸೈಟ್‌ನ ಮಗುವಿನ ಪ್ರವೇಶಾವಕಾಶ ಹಾಗೂ ಬಳಕೆಯ ಮೇಲ್ವಿಚಾರಣೆಯನ್ನು ಒಳಗೊಂಡು, ಯಾವುದೇ ಮಿತಿಯಿಲ್ಲದೆ ಅಂತಹ ಮಗುವಿನ ನಡವಳಿಕೆಯ ಎಲ್ಲಾ ಜವಾಬ್ದಾರಿ ಹಾಗೂ ಕಾನೂನು ಹೊಣೆಗಾರಿಕೆಯನ್ನು ವಹಿಸಿಕೊಂಡು 13 ವರ್ಷಗಳೊಳಗಿನ ಮಕ್ಕಳಿಗೆ ಟಿಎಮ್‌ಎಲ್ ಸೈಟ್ ಅನ್ನು ಬಳಸಲು ಅಧಿಕಾರ ನೀಡಬಹುದು,
13 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯ ವೈಯಕ್ತಿಕ ಡೇಟಾವನ್ನು ಪರಿಶೀಲಿಸಬಹುದಾದ ಪೋಷಕರ ಒಪ್ಪಿಗೆಯಿಲ್ಲದೇ ಸಂಗ್ರಹಿಸಲಾಗಿದೆ ಎಂದು ಟಿಎಮ್‌ಎಲ್‌ಗೆ ಗೊತ್ತಾದರೆ, ಆಗ ಅಂತಹ ಮಾಹಿತಿಯನ್ನು ಡಿಲೀಟ್ ಮಾಡಲು ಟಿಎಮ್‌ಎಲ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ಹೀಗಿದ್ದಾಗ್ಯೂ, ನಿಮ್ಮ ಮಗುವು ಟಿಎಮ್‌ಎಲ್‌ಗೆ ಅವನ/ಅವಳ ಡೇಟಾವನ್ನು ಸಲ್ಲಿಸಿರುವುದನ್ನು ನೀವು ಕಂಡುಕೊಂಡರೆ, ಇ-ಮೇಲ್ ಕೋರಿಕೆಯನ್ನು ಕಳುಹಿಸುವ ಮೂಲಕ ಟಿಎಮ್‌ಎಲ್ ಡೇಟಾ ಬೇಸ್‌ನಿಂದ ಅಂತಹ ಡೇಟಾವನ್ನು ಡಿಲೀಟ್ ಮಾಡಲು [ಅಳಿಸಲು]ನೀವು ವಿನಂತಿಸಿಕೊಳ್ಳಬಹುದು. ಕೋರಿಕೆಯನ್ನು ಸ್ವೀಕರಿಸಿದ ನಂತರ ಅದರ ಡೇಟಾಬೇಸ್‌ನಿಂದ ಅಂತಹ ಮಾಹಿತಿಯನ್ನು ಡಿಲೀಟ್ ಮಾಡುವುದನ್ನು ಟಿಎಮ್‌ಎಲ್ ಖಚಿತಪಡಿಸುತ್ತದೆ.
ನಿಮ್ಮ ಹಕ್ಕುಗಳು ಹಾಗೂ ನಿಮ್ಮ ವೈಯಕ್ತಿಕ ಡೇಟಾ
ನಿಮ್ಮ ಮಾಹಿತಿಯನ್ನು ಪ್ರವೇಶಿಸುವ ಹಾಗೂ ನಿಯಂತ್ರಿಸುವ ನಿಮ್ಮ ಹಕ್ಕನ್ನು ನಾವು ಗೌರವಿಸುತ್ತೇವೆ, ಹಾಗೂ ಮಾಹಿತಿಗಾಗಿನ ಕೋರಿಕೆಗಳಿಗೆ ನಾವು ಸ್ಪಂದಿಸುತ್ತೇವೆ ಹಾಗೂ, ಅನ್ವಯವಾಗುವಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸರಿಪಡಿಸುತ್ತೇವೆ , ತಿದ್ದುಪಡಿ ಮಾಡುತ್ತೇವೆ , ಅಥವಾ ಡಿಲೀಟ್ ಮಾಡುತ್ತೇವೆ. ಅಂತಹ ಸಂದರ್ಭಗಳಲ್ಲಿ , ಈ ಹಕ್ಕುಗಳನ್ನು ಚಲಾಯಿಸುವ ಮೊದಲು ನಿಮ್ಮ ಗುರುತಿನ ಪುರಾವೆಯೊಂದಿಗೆ ನಮಗೆ ನೀವು ಪ್ರತಿಕ್ರಿಯಿಸಬೇಕಾಗುತ್ತದೆ.
- ಮಾಹಿತಿಯ ಪ್ರವೇಶಾವಕಾಶದ ಹಕ್ಕು : ನಾವು ನಿಮ್ಮ ಬಗ್ಗೆ ಹೊಂದಿರುವ ಮಾಹಿತಿಯನ್ನು ಕೋರಲು ಹಾಗೂ ನಾವು ಏಕೆ ಆ ಮಾಹಿತಿಯನ್ನು ಹೊಂದಿದ್ದೇವೆ, ಯಾರು ಮಾಹಿತಿಗೆ ಪ್ರವೇಶಾವಕಾಶವನ್ನು ಪಡೆಯಬಹುದು ಹಾಗೂ ನಾವು ಎಲ್ಲಿಂದ ಆ ಮಾಹಿತಿಯನ್ನು ಪಡೆದಿದ್ದೇವೆ ಎಂದು ಕೋರಲು ನೀವು ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಕೋರಿಕೆಯನ್ನು ಒಮ್ಮೆ ನಾವು ಸ್ವೀಕರಿಸಿದನಂತರ ಒಂದು ತಿಂಗಳದೊಳಗೆ ನಾವು ನಿಮಗೆ ಪ್ರತಿಕ್ರಿಯಿಸುತ್ತೇವೆ. ಮೊದಲನೇ ಕೋರಿಕೆಗಾಗಿ ಯಾವುದೇ ಶುಲ್ಕಗಳು ಅಥವಾ ವೆಚ್ಚಗಳಿರುವುದಿಲ್ಲ ಆದರೆ ಆದೇ ಡೇಟಾಕ್ಕಾಗಿ ಹೆಚ್ಚುವರಿ ಕೋರಿಕೆಗಳು ಆಡಳಿತಾತ್ಮಕ ಶುಲ್ಕಕ್ಕೆ ಒಳಪಟ್ಟಿರಬಹುದು.
- ಮಾಹಿತಿಯನ್ನು ಸರಿಪಡಿಸುವ ಹಾಗೂ ನವೀಕರಿಸುವ ಹಕ್ಕು: ನಿಮ್ಮ ಬಗ್ಗೆ ನಾವು ಹೊಂದಿರುವ ಡೇಟಾವು ಹಳೆಯದಾಗಿದ್ದರೆ,ಅಪೂರ್ಣವಾಗಿದ್ದರೆ ಅಥವಾ ಸರಿಯಾಗಿರದಿದ್ದರೆ, ನೀವು ನಮಗೆ ತಿಳಿಸಬಹುದು ಹಾಗೂ ನಿಮ್ಮ ಡೇಟಾವನ್ನು ನವೀಕರಿಸಲಾಗುತ್ತದೆ.
- ನಿಮ್ಮ ಮಾಹಿತಿಯನ್ನು ಅಳಿಸಿ ಹಾಕುವಹಕ್ಕು : ನಾವು ಇನ್ನು ಮುಂದೆ ನಿಮ್ಮ ಡೇಟಾವನ್ನು ಬಳಸಬಾರದು ಅಥವಾ ನಿಮ್ಮ ಡೇಟಾವನ್ನು ನಾವು ಕಾನೂನು ಬಾಹಿರವಾಗಿ ಬಳಸುತ್ತಿದ್ದೇವೆ ಎಂದು ನಿಮಗೆ ಅನಿಸಿದರೆ, ನಾವು ಹೊಂದಿರುವ ಡೇಟಾವನ್ನು ಅಳಿಸಿಹಾಕಲು ನೀವು ಕೋರಬಹುದು. ನಾವು ನಿಮ್ಮ ಕೋರಿಕೆಯನ್ನು ಸ್ವೀಕರಿಸಿದಾಗ ಡೇಟಾವನ್ನು ಅಳಿಸಲಾಗಿದೆಯೇ ಅಥವಾ ಅದನ್ನು ಅಳಿಸಲಾಗದ ಕಾರಣವನ್ನು ನಾವು ಖಚಿತಪಡಿಸುತ್ತೇವೆ [ಉದಾಹರಣೆಗಾಗಿ ನಮ್ಮ ಕಾನೂನು ಬದ್ಧ ಹಿತಾಸಕ್ತಿಗಳು ಅಥವಾ ನಿಯಂತ್ರಕ ಉದ್ದೇಶಗಳಿಗಾಗಿ ಇದು ನಮಗೆ ಬೇಕಾಗುತ್ತದೆ].
- ಪ್ರಕ್ರಿಯೆಗೆ ಆಕ್ಷೇಪಿಸುವ ಹಕ್ಕು : ನಾವು ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸುವುದನ್ನು ನಿಲ್ಲಿಸುವಂತೆ ಕೋರುವ ಹಕ್ಕನ್ನು ನೀವು ಹೊಂದರುತ್ತೀರಿ. ಕೋರಿಕೆಯನ್ನು ಸ್ವೀಕರಿಸಿದ ನಂತರ , ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಹಾಗೂ ನಾವು ಅನುಸರಿಸಲು ಸಮರ್ಥರಾಗಿದ್ದೇವೆಯೇ ಅಥವಾ ನಿಮ್ಮ ಡೇಟಾ ಪ್ರಕ್ರಿಯೆಗಳನ್ನು ಮುಂದುವರಿಸಲು ನಮಗೆ ನ್ಯಾಯಸಮ್ಮತವಾದ ಆಧಾರಗಳಿದ್ದರೆ ನಿಮಗೆ ತಿಳಿಸುತ್ತೇವೆ. ನಿಮ್ಮ ಆಕ್ಷೇಪಣೆಯ ಹಕ್ಕನ್ನು ನೀವು ಚಲಾಯಿಸಿದ ನಂತರವೂ ನಿಮ್ಮ ಇತರ ಹಕ್ಕುಗಳನ್ನು ನೀವು ಅನುಸರಿಸಲು ಕಾನೂನು ಕ್ಲೇಮ್‌ಗಳನ್ನು ತರಲು ಹಾಗೂ ರಕ್ಷಿಸಲು ನಾವು ನಿಮ್ಮ ಡೇಟಾವನ್ನು ಹಿಡಿದಿಟ್ಟುಕೊಳ್ಳುವುದನ್ನು ಮುಂದುವರೆಸಬಹುದು.
- ಡೇಟಾ ಪೋರ್ಟ್ಯಾಬಿಲಿಟಿ ಹಕ್ಕು : ನಿಮ್ಮ ಕೆಲವು ಡೇಟಾವನ್ನು ನಾವು ಮತ್ತೊಬ್ಬ ನಿಯಂತ್ರಕರಿಗೆ ವರ್ಗಾಯಿಸುವಂತೆ ಕೋರುವ ಹಕ್ಕನ್ನು ನೀವು ಹೊಂದಿರುತ್ತೀರಿ. ನಿಮ್ಮ ಕೋರಿಕೆಯನ್ನು ನಾವು ಅನುಸರಿಸುತ್ತೇವೆ, ನಿಮ್ಮ ಕೋರಿಕೆಯನ್ನು ಸ್ವೀಕರಿಸಿದ ಒಂದು ತಿಂಗಳೊಳಗೆ ಹಾಗೆ ಮಾಡಬಹುದಾಗಿರುತ್ತದೆ.
- ಡೇಟಾದ ಯಾವುದೇ ಪ್ರಕ್ರಿಯೆಗಾಗಿ ಕೋರಲಾಗಿರುವ ಹಕ್ಕನ್ನು ಯಾವುದೇ ಸಮಯದಲ್ಲಿ ಪಕ್ರಿಯಗೊಳಿಸುವುದಕ್ಕೆ ನಿಮ್ಮ ಒಪ್ಪಿಗೆಯನ್ನು ಹಿಂಪಡೆಯುವ ಹಕ್ಕು. ನೀವು ನಿಮ್ಮ ಒಪ್ಪಿಗೆಯನ್ನು ದೂರವಾಣಿ, ಇಮೇಲ್, ಅಥವಾ ಪೋಸ್ಟ್ ಮೂಲಕ [ಕನ್‌ಸೆಂಟ್ ವಿಥ್‌ಡ್ರಾವಲ್ ಫಾರ್ಮ್ ಅನ್ನು ಅವಲೋಕಿಸಿ] ಸುಲಭಾವಾಗಿ ಹಿಂತೆಗೆದುಕೊಳ್ಳಬಹುದು.
- ಅನ್ವಯವಾಗುವಲ್ಲಿ ವೈಯಕ್ತಿಕ ಡೇಟಾದ ಪ್ರಕ್ರಿಯೆಗೆ ಆಕ್ಷೇಪಿಸುವ ಹಕ್ಕು .
- ಡೇಟಾ ಪ್ರೊಟೆಕ್ಷನ್ ರೆಪ್ರೆಸೆಂಟೇಟಿವ್ [ಡೇಟಾ ರಕ್ಷಣಾ ಪ್ರತಿನಿಧಿ]ಗೆ ದೂರನ್ನು ನೀಡುವ ಹಕ್ಕು
ನಿಮ್ಮ ವೆಯಕ್ತಿಕ ಡೇಟಾವನ್ನು ನಾವು ಎಷ್ಟು ದಿನ ಇಟ್ಟುಕೊಳ್ಳುತ್ತೇವೆ ?
ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಕಾನೂನು ಅಥವಾ ವ್ಯವಹಾರಗಳ ಉದ್ದೇಶಗಳಿಗಾಗಿ ಸಮಂಜಸವಾಗಿ ನಮಗೆ ಅಗತ್ಯವಿರುವವರೆಗೆ ನಾವು ಅದನ್ನು ಉಳಿಸಿಕೊಳ್ಳುತ್ತೇವೆ. ಡೇಟಾ ಉಳಿಸಿಕೊಳ್ಳುವ ಅವಧಿಗಳನ್ನು ನಿರ್ಧರಿಸುವಲ್ಲಿ, ಸ್ಥಳೀಯ ಕಾನೂನುಗಳು, ಒಪ್ಪಂದದ ಕಟ್ಟುಪಾಡುಗಳು, ಹಾಗೂ ನಮ್ಮ ಗ್ರಾಹಕರ ನಿರೀಕ್ಷೆಗಳು ಹಾಗೂ ಅಗತ್ಯತೆಗಳನ್ನು ಟಿಎಮ್‌ಎಲ್ ಪರಿಗಣಿಸುತ್ತದೆ. ನಮಗೆ ಇನ್ನು ಮುಂದೆ ವೈಯಕ್ತಿಕ ಮಾಹಿತಿಯು ಅಗತ್ಯವಿಲ್ಲದಿದ್ದಾಗ , ಅದನ್ನು ನಾವು ಸುರಕ್ಷಿತವಾಗಿ ಡಿಲೀಟ್ ಮಾಡುತ್ತೇವೆ ಅಥವಾ ನಾಶಪಡಿಸುತ್ತೇವೆ.
ನಮ್ಮ ಗೌಪ್ಯತಾ ನೋಟೀಸ್‌ಗೆ ಬದಲಾವಣೆಗಳು
ಟಿಎಮ್‌ಎಲ್ ಸಮಯಸಮಯಕ್ಕೆ ಗೌಪ್ಯತಾ ನೋಟೀಸ್ ಆನ್ನು ನವೀಕರಿಸಬಹುದು. ಪ್ರಸ್ತುತ ಗೌಪ್ಯತೆ ನೋಟೀಸ್ ಅನ್ನು ನೋಡಲು ನಮ್ಮ ವೆಬ್‌ಸೈಟ್ ಅನ್ನು ಆಗಾಗ್ಗೆ ಪರಿಶೀಲಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ, ಇದರಿಂದ ನಿಮ್ಮ ಮಾಹಿತಿಯನ್ನು ಟಿಎಮ್‌ಎಲ್ ಹೇಗೆ ಬಳಸುತ್ತಿದೆ ಹಾಗೂ ರಕ್ಷಿಸುತ್ತಿದೆ ಎನ್ನುವ ಬಗ್ಗೆ ನೀವು ಮಾಹಿತಿಯುಳ್ಳವರಾಗಿರಬಹುದು. ಈ ನೋಟೀಸ್‌ಗೆ ಬದಲಾವಣೆ ಗಮನಾರ್ಹವಾದಾಗಲೆಲ್ಲ , ನಾವು ಈ ವೆಬ್‌ಸೈಟ್‌ನಲ್ಲಿ ಪ್ರಮುಖ ನೋಟೀಸ್ ಅನ್ನು ಹಾಕುತ್ತೇವೆ ಹಾಗೂ ನವೀಕರಿಸಿರುವ ಪರಿಣಾಮಕಾರಿ ದಿನಾಂಕವನ್ನು ಒದಗಿಸುತ್ತೇವೆ.
ಪ್ರಶ್ನೆಗಳು / ಸಂಪರ್ಕ ಮಾಹಿತಿ
ಈ ಗೌಪ್ಯತಾ ನೋಟೀಸ್‌ಗೆ ಸಂಬಂಧಿಸಿದಂತೆ ನೀವು ಯಾವುದೇ ಪ್ರಶ್ನೆಗಳು ಅಥವಾ ಟೀಕೆ ಟಿಪ್ಪಣಿಗಳನ್ನು ಹೊಂದಿದ್ದರೆ , ದಯವಿಟ್ಟು ನಮ್ಮನ್ನು ಸಂಪರ್ಕಿಸಿ .
ಇಮೇಲ್ : [email protected]
ಪರಿಣಾಮಕಾರಿ ದಿನಾಂಕ : 28.09.18